ಸೌಂದರ್ಯ ಕನ್ನಡ ಸಾಹಿತ್ಯ ವೇದಿಕೆ ‘ಸೌಂದರ್ಯ ಸುಧೆ’ ಉದ್ಘಾಟಿಸಿದ ಕನ್ನಡದ ಶ್ರೇಷ್ಠ ಸಾಹಿತಿ ಮತ್ತು ವಿಜ್ಞಾನಿ ಶ್ರೀಮತಿ ನೇಮಿಚಂದ್ರ.
ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಸೌಂದರ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೌಂದರ್ಯ ಕನ್ನಡ ಸಾಹಿತ್ಯ ವೇದಿಕೆ- ‘ಸೌಂದರ್ಯ ಸುಧೆ’ 2024 – 25 ಅನ್ನು ಕನ್ನಡ ಪ್ರಸಿದ್ಧ ಸಾಹಿತಿ ಸ್ಪೂರ್ತಿದಾಯಕ ಬರಹಗಾರರಾದ ಶ್ರೀಮತಿ ನೇಮಿಚಂದ್ರ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಶ್ರೀಯುತ ವರುಣ್ ಕುಮಾರ್ ಮತ್ತು ಶ್ರೀಮತಿ ನಿಶ್ಮಿತಾ ವರುಣ್ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಕ್ಯಾಪ್ಟನ್ ಮಹಾಬಲೇಶ್ವರ ತುಂಗ, ಉಪ ಪ್ರಾಂಶುಪಾಲರಾದ ಶ್ರೀಮತಿ ಕೃಪಾ ಆರ್ ದೇವ್ ಉಪಸ್ಥಿತರಿದ್ದರು.
‘ಮಾನಸಿಕ ಸದೃಢತೆ ಮತ್ತು ಆರೋಗ್ಯಕರ ಡಿಜಿಟಲ್ ಬಳಕೆ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಪ್ರಸ್ತುತ ದಿನಗಳಲ್ಲಿ ಹಲವು ವಿದ್ಯಾರ್ಥಿಗಳು ಕಡಿಮೆ ಅಂಕಗಳ ಗಳಿಕೆ, ಉನ್ನತ ವ್ಯಾಸಂಗಕ್ಕೆ ಪ್ರವೇಶ ದೊರೆತಿಲ್ಲ ಹೀಗೆ ಕ್ಷುಲ್ಲಕ ಕಾರಣಗಳಿಗೆಲ್ಲ ಪ್ರಾಣಹಾನಿ ಮಾಡಿಕೊಳ್ಳುವಷ್ಟು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಜೀವನದ ಸವಾಲುಗಳೆಂದು ಸ್ವೀಕರಿಸಿ, ಇಲ್ಲದಿರುವುದರ ಬಗ್ಗೆ ಯೋಚಿಸದೆ ಇರುವುದರಲ್ಲೆ ಸಾಕಷ್ಟು ಸಾಧನೆಗೈಯಲು ಸಾಧ್ಯವೆಂದು ಅಭಿಪ್ರಾಯ ಪಟ್ಟರು. ದೈಹಿಕವಾಗಿ ಅಂಗಾಂಗಗಳನ್ನು ಕಳೆದುಕೊಂಡು ಅಚ್ಚರಿಪಡುವಂತಹ ಸಾಧನೆಗೈದ ಮಹನೀಯರ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಎಂಬುದು ಅನಿವಾರ್ಯವಾಗಿದೆ ಅದನ್ನು ಆರೋಗ್ಯವಾಗಿ ಶಿಕ್ಷಣಕ್ಕಾಗಿ ಬಳಸಿಕೊಳ್ಳಬೇಕು ಎಂದು ವಿವರಿಸಿದರು. ನೇಮಿಚಂದ್ರರ ‘ಆಯ್ಕೆ ಇದೆ ನಮ್ಮ ಕೈಯಲ್ಲಿ’ ಎಂಬ ಲೇಖನವೂ ದ್ವಿತೀಯ ಪಿಯುಸಿ ಕನ್ನಡ ವಿಷಯದಲ್ಲಿ ಪಠ್ಯವಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸ್ಪೂರ್ತಿಯನ್ನು ಪಡೆದರು.
ಪ್ರಾಂಶುಪಾಲರಾದ ಕ್ಯಾಪ್ಟನ್ ಮಹಾಬಲೇಶ್ವರ ತುಂಗ ಸ್ವಾಗತಿಸಿದರು
ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಪರಮೇಶ ಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕರಾದ ಹರೀಶ್ ಮಂದಾರ್ತಿ ವಂದಿಸಿದರು.