ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡ ಜ್ಯೋತಿ ರಥ’ ವು ಬೆಂಗಳೂರು ನಗರದಲ್ಲಿ ಬುಧವಾರ ನೆಲಮಂಗಲದಿಂದ ಸಂಚಾರ ಪ್ರಾರಂಭಿಸಿದ್ದು, ನಾಗಸಂದ್ರ ಮೆಟ್ರೋ ರೈಲು ನಿಲ್ದಾಣದ ಬಳಿ ಸೌಂದರ್ಯ ಕಾಲೇಜಿನ ವಿದ್ಯಾರ್ಥಿಗಳು ತಾಯಿ ಭುವನೇಶ್ವರಿ ಬೆಳ್ಳಿರಥವನ್ನು ಅದ್ದೂರಿಯಿಂದ ಸ್ವಾಗತಿಸಿದರು.