ದಿನಾಂಕ ೧೫/೦೭/೨೦೨೫ ರಂದು ಮಂಗಳವಾರ ಸೌಂದರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗವು 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಕನ್ನಡ ಸಾಹಿತ್ಯ ವೇದಿಕೆಯ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಕನ್ನಡದ ಹಾಸ್ಯಕವಿಗಳು, ಚುಟುಕು ಚಕ್ರವರ್ತಿ ಆಗಿರುವ ಎಚ್. ಡುಂಡಿರಾಜರು ಉದ್ಘಾಟಿಸಿದರು. ಕನ್ನಡ ಭಾಷೆಯ ಸರಳತೆ, ಮಹತ್ವ ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಚುಟುಕುಗಳನ್ನು ಉದಾಹರಿಸುತ್ತಾ ಕವಿತೆ ಓದುವ, ರಚಿಸುವ ಅಭ್ಯಾಸ ಮಾಡಿಕೊಳ್ಳುವಂತೆ ತಿಳಿಸಿದರು. ವೇದಿಕೆಯಿಂದ ಭವಿಷ್ಯದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಸೌಂದರ್ಯ ಸಮೂಹ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಶ್ರೀ ವರುಣ್ ಕುಮಾರ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕ್ಯಾಪ್ಟನ್ ಮಹಾಬಲೇಶ್ವರ ತುಂಗ ಉಪಸ್ಥಿತರಿದ್ದರು.





